ದೇವ, ಎನ್ನ ಹೃದಯಕಮಲದೊಳಗೆ ಪ್ರಜ್ವಳಿಪ್ಪ ಬೆಳಗೆ ದೇವ, ಎನ್ನ ಮನದ ಮೊನೆಯೊಳೊಪ್ಪುತಿರ್ಪ ಬೆಳಗಿನೊಳಗೆ ಗುರುವೆ ಬಾರ, ಪರವೆ ಬಾರ, ವರವೆ ಬಾರ, ದೇವದೇವ ಹರನೆ ಬಾರ, ಸುಕೃತಸಾರ ಸರ್ಪಹಾರ ಬಾರ ದೇವ ವೀರಭದ್ರ, ರುದ್ರ, ದುರಿತದೂರ, ವಿಶ್ವರೂಪ ಬಾರ ಮಾರಮಥನ, ಪುಣ್ಯಕಥನ, ಸಹಜಮಿಥುನರೂಪ ಬಾರ ತರಗಿರಿಯ ಪಿರಿಯ ಸಿರಿಯ ಸತ್ಯಶರಣ ಭರಣ ಬಾರ ಬಾರ ಫಲವೆ, ಫಲದ ರಸವೆ, ರಸದ ಸವಿಯ ಸುಖವೆ ಬಾರ ಬಾರ ಗುರುವೆ, ಬಾರ ಪರವೆ, ಬಾರ ವರವೆ ಮಲ್ಲಿನಾಥ ಬಾರ ಧನವೆ, ಬಾರ ಸುಕೃತಸಾರ ಬಾರ ಮಲ್ಲಿನಾಥ ಬರ ಸಿದ್ಧ, ಭವವಿರುದ್ಧ ಸುಪ್ರಸಿದ್ಧ ಮಲ್ಲಿನಾಥ ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ ಬಾರ
Blog Archive
-
▼
2016
(30)
-
▼
January
(30)
- ಅಕ್ಕ ಮಹಾದೇವಿ ವಚನಗಳು ೧೦
- ಅಕ್ಕ ಮಹಾದೇವಿ ವಚನಗಳು ೯
- ಅಕ್ಕ ಮಹಾದೇವಿ ವಚನಗಳು ೮
- ಅಕ್ಕ ಮಹಾದೇವಿ ವಚನಗಳು ೭
- ಅಕ್ಕ ಮಹಾದೇವಿ ವಚನಗಳು ೬
- ಅಕ್ಕ ಮಹಾದೇವಿ ವಚನಗಳು ೫
- ಅಕ್ಕ ಮಹಾದೇವಿ ವಚನಗಳು ೪
- ಅಕ್ಕ ಮಹಾದೇವಿ ವಚನಗಳು ೩
- ಅಕ್ಕ ಮಹಾದೇವಿ ವಚನಗಳು ೨
- ಅಕ್ಕ ಮಹಾದೇವಿ ವಚನಗಳು ೧
- ಸರ್ವಜ್ಞ ವಚನ ೧೦
- ಸರ್ವಜ್ಞ ವಚನ ೯
- ಸರ್ವಜ್ಞ ವಚನ ೮
- ಸರ್ವಜ್ಞ ವಚನ ೭
- ಸರ್ವಜ್ಞ ವಚನ ೬
- ಸರ್ವಜ್ಞ ವಚನ ೫
- ಸರ್ವಜ್ಞ ವಚನ ೪
- ಸರ್ವಜ್ಞ ವಚನ ೩
- ಸರ್ವಜ್ಞ ವಚನ ೨
- ಸರ್ವಜ್ಞ ವಚನ ೧
- ಬಸವಣ್ಣ ವಚನ ೧೦
- ಬಸವಣ್ಣ ವಚನ ೯
- ಬಸವಣ್ಣ ವಚನ ೮
- ಬಸವಣ್ಣ ವಚನ ೭
- ಬಸವಣ್ಣ ವಚನ ೬
- ಬಸವಣ್ಣ ವಚನ ೫
- ಬಸವಣ್ಣ ವಚನ ೪
- ಬಸವಣ್ಣ ವಚನ ೩
- ಬಸವಣ್ಣ ವಚನ ೨
- ಬಸವಣ್ಣ ವಚನ ೧
-
▼
January
(30)